ತಂಪು ತಂಪು ಕೂಲ್ ಕೂಲ್ “ಕೂಡ್ಲು”: ಬೇಸಿಗೆಗೂ ಕರಗದ ಈ ಜಲಪಾತದ ಚಂದ ನೋಡಿ ಬನ್ನಿ

ಬೇಸಿಗೆಯಲ್ಲೂ ಇಲ್ಲಿ ತಂಪು ತಂಪು ಕೂಲ್ ಕೂಲ್ ಎನ್ನುವ ಹಿತವಿರುತ್ತದೆ. ಬಿಸಿಲಿನ ಬೇಗೆಗೆ ಬಳಲಿ ಬೆಂಡಾಗಿ ಇಲ್ಲಿಗೆ ಬಂದರೆ ಆಹಾ ಜಲಪಾತದ ತಂಪಿಗೆ ಮೈ ಮನವೆಲ್ಲಾ ಬೆರಗಾಗುತ್ತದೆ. ಬೇಸಿಗೆಯಲ್ಲೂ ಕಾಡುವ ಈ ಜಲಪಾತವೇ ಉಡುಪಿ ಜಿಲ್ಲೆಯ ಕೂಡ್ಲು ಎನ್ನುವ ಸುರಸುಂದರಿ. ಆಗುಂಬೆ- ಹೆಬ್ರಿ ಮಾರ್ಗದಲ್ಲಿ ಸಿಗುವ ಈ ಕೂಡ್ಲು ತೀರ್ಥ ಜಲಪಾತಕ್ಕೆ ದಾರಿ ಹಿಡಿದರೆ, ದೂರದಲ್ಲೆಲ್ಲೋ ಜಲಪಾತದ ಸಂಗೀತ ಕೇಳಿಸುತ್ತದೆ. ಸುತ್ತಲೂ ಮುಗಿಲ ನೆತ್ತಿಗೆ ತಾಗಿದಂತೆ ನಿಂತಿರುವ ಹಸಿರ ಬೆಟ್ಟದ ತುದಿಯನ್ನು ನೋಡುತ್ತ ಈ ಕಾಡಿನಲ್ಲಿ ಚಾರಣ […]