ಶಾಲಾರಂಭ ಸ್ವಲ್ಪ ತಡವಾಗಬಹುದು, ಸುಳಿವು ನೀಡಿದ ಶಿಕ್ಷಣ ಸಚಿವ

ತುಮಕೂರು: 9,10,11,12ನೇ ಭೌತಿಕ ತರಗತಿಗಳ ಆರಂಭ ತಡವಾಗಬಹುದು ಎಂಬ ಸುಳಿವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ಸುರೇಶ್ ಅವರು ನೀಡಿದ್ದಾರೆ. ಆಗಸ್ಟ್ 23 ರಿಂದ 9-12ನೇ ತರಗತಿಗಳ ಭೌತಿಕ ಆರಂಭ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದು ತಾತ್ಕಾಲಿಕ ದಿನಾಂಕವಾಗಿದ್ದು, ಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನಿಖರವಾದ ವೇಳಾಪಟ್ಟಿಯನ್ನು ಸಿದ್ಧಪಡಿಸಿ ತಿಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿ ನಿಭಾಯಿಸುವುದರಲ್ಲಿ ನಾನು ಕಾರ್ಯನಿರತನಾಗಿದ್ದೆ. ಶೀಘ್ರದಲ್ಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. […]