ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ವಜ್ರಮಹೋತ್ಸವ ವರ್ಷ ಉದ್ಘಾಟನೆ

ಕಾರ್ಕಳ: ಇಲ್ಲಿನ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕಾಲೇಜು ಸ್ಥಾಪನೆಯಾಗಿ 60 ವರ್ಷವಾದ ಸಂಭ್ರಮದಲ್ಲಿ ವಜ್ರ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು 6೦ನೇ ವರ್ಷದ ವಜ್ರಮಹೋತ್ಸವದ ಲಾಂಛನ ಹಾಗೂ ವರ್ಷಾಚರಣೆಯನ್ನು ಶ್ರೀ ಭುವನೇಂದ್ರ ಸ್ವಾಮೀಜಿಯವರ ನೆನಪಿನಲ್ಲಿ ಶ್ರೀ ಸಂಸ್ಥಾನ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರತೀರ್ಥ ಶ್ರೀಪಾದರು ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಉದ್ಘಾಟನೆಯ ನಂತರ ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದ ಅವರು, ಭುವನೇಂದ್ರ ಸ್ವಾಮಿಗಳ ಆಶೀರ್ವಾದದಿಂದ ಅಂದು ಶುರುವಾದ ಈ ಕಾಲೇಜು ಇಂದು 6೦ನೇ ವರ್ಷಕ್ಕೆ ಕಾಲಿಟ್ಟದೆ, ಈ ಕಾಲೇಜಿಗೆ ಎಂದಿಗೂ […]