ಉಡುಪಿ: ಕ್ರೆಡೈ ವತಿಯಿಂದ ಸಂಚಾರಿ ಪೊಲೀಸರಿಗೆ ರೈನ್ ಕೋಟ್ ವಿತರಣೆ

ಉಡುಪಿ, ಜೂ. 28: ಕ್ರೆಡೈ ವತಿಯಿಂದ ಸಿಎಸ್‌ಆರ್ ಯೋಜನೆಯಡಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರಿಗೆ ಕೊಡಮಾಡಿದ ೪೦ ರೈನ್‌ಕೋಟ್‌ಗಳ ವಿತರಣೆ ಶುಕ್ರವಾರ ಎಸ್ಪಿ ಕಚೇರಿಯಲ್ಲಿ ನಡೆಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ರೈನ್ ಕೋಟ್ ವಿತರಿಸಿ ಮಾತನಾಡಿ, ಹೆದ್ದಾರಿ ರಸ್ತೆಯಲ್ಲಿರುವ ಅನಧಿಕೃತ ಬಸ್ ನಿಲ್ದಾಣದಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಡಿವೈಎಸ್ಪಿ ಅವರಿಗೆ ಸೂಚನೆ ನೀಡಲಾಗಿದೆ.ಉಡುಪಿ ಹಾಗೂ ಕುಂದಾಪುರದಲ್ಲಿ ಪ್ರಥಮವಾಗಿ ಈ ಪರಿಶೀಲನೆ ಕಾರ್ಯ ನಡೆಯಲಿದೆ.ಅಧಿಕಾರಿಗಳು ಅಧಿಕೃತ ಸ್ಥಳ ಗುರುತಿಸಿ, […]