ಕೃತಿಯ ಮೂಲಭಾಷೆ ಅರಿತರೆ ಅನುವಾದ ಸಮರ್ಥವಾಗಿಸಬಹುದು: ಪಾರ್ವತಿ‌ ಜಿ.ಐತಾಳ್ 

ಉಡುಪಿ: ನಾವು ಆಯ್ದುಕೊಳ್ಳುವ ಕೃತಿಯ ಮೂಲಭಾಷೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಗ್ರಹಿಸಿಕೊಳ್ಳುವ ಶಕ್ತಿಯಿದ್ದರೆ, ಅನುವಾದವನ್ನು ಸಮರ್ಥವಾಗಿ ಅಭಿವ್ಯಕ್ತಿಪಡಿಸಬಹುದು ಎಂದು ಲೇಖಕಿ ಡಾ. ಪಾರ್ವತಿ ಜಿ. ಐತಾಳ್‌ ಹೇಳಿದರು. ರಥಬೀದಿ ಗೆಳೆಯರು ಉಡುಪಿ ಹಾಗೂ ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಸಹಯೋಗದಲ್ಲಿ ಉಡುಪಿ ಪೇಜಾವರ ಮಠದ ಹಿಂಭಾಗದ ರಾಮವಿಠಲ ಸಭಾಭವನದಲ್ಲಿ ಶನಿವಾರ ನಡೆದ ಡಾ. ಮಹಾಲಿಂಗ ಭಟ್‌ ಅವರ ‘ನಾಣಜ್ಜೆರ್‌ ಸುದೆ ತಿರ್ಗಾಯೆರ್‌’ ತುಳು ಕಾದಂಬರಿಯನ್ನು ಡಾ. ಟಿ.ಕೆ. ರವೀಂದ್ರನ್‌ ಇಂಗ್ಲಿಷ್‌ ಭಾಷೆಗೆ ಅನುವಾದಿಸಿದ ‘ಅನ್‌ ಹೆಡ್‌ ಸೌಂಡ್ಸ್‌ ಆನ್‌’ […]