ಆರೋಗ್ಯ ಗಂಭೀರವಾಗಿದ್ದರೂ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ: ಡಾ.ಸುಧಾ ವಿದ್ಯಾ ಸಾಗರ್

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆರೋಗ್ಯ ‌ಸ್ಥಿತಿ ಗಂಭೀರವಾಗಿದ್ದರೂ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಂಡದ ನೇತೃತ್ವ ವಹಿಸಿರುವ ಡಾ.ಸುಧಾ ವಿದ್ಯಾ ಸಾಗರ್ ತಿಳಿಸಿದ್ದಾರೆ. ಈ ಕುರಿತು  ಶುಕ್ರವಾರ ಸಾಯಂಕಾಲ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ವೈದ್ಯರ ತಂಡ ಶ್ರೀಗಳ ಆರೋಗ್ಯ, ಚಿಕಿತ್ಸೆ ಸಂಬಂಧಿಸಿ ಮಾಹಿತಿ ನೀಡಿದರು. ಶ್ರೀಗಳಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ: ಶ್ರೀಗಳಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌. ಆರೋಗ್ಯದ ಬಗ್ಗೆ ನಿಖರ‌ ಮಾಹಿತಿ ಒಂದೆರಡು ದಿನಗಳಲ್ಲಿ ತಿಳಿಸಲಾಗುವುದು. ಬೆಳಗ್ಗೆಗಿಂತ ಇಂದು‌ […]