ಕುಂದಾಪುರ: ಜನರಿಗೆ ಮತ್ತೆ ಕರ್ಫ್ಯೂ ಭೀತಿ: ಅಗತ್ಯ ವಸ್ತು ಕೊಂಡುಕೊಳ್ಳಲು ಮುಗಿಬಿದ್ದ ಜನತೆ

ಕುಂದಾಪುರ: ಯಾವ ಕ್ಷಣದಲ್ಲಾದರೂ ಜಿಲ್ಲಾಡಳಿತ ಕರ್ಫ್ಯೂ ಆದೇಶ ಹೊರಡಿಸಬಹುದೆಂಬ ಭೀತಿಯಿಂದಾಗಿ ಸಾರ್ವಜನಿಕರು ಅಗತ್ಯವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬೀಳುತ್ತಿರುವ ದೃಶ್ಯ ಕುಂದಾಪುರ ನಗರದಲ್ಲಿ ಸೋಮವಾರ ಸಂಜೆ ಕಂಡುಬಂದಿದೆ. ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಅನ್ನು ತಡೆಗಟ್ಟಲು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟ ಜನತಾ ಕರ್ಫ್ಯೂಗೆ ಜೈ ಎಂದ ತಾಲೂಕಿನ ಜನತೆ ಇದೀಗ ಮತ್ತೆ ಕರ್ಫ್ಯೂ ವಿಧಿಸಬಹುದು ಎಂದು ಮುನ್ನೆಚ್ಚರಿಕೆಯಿಂದ ದಿನಸಿ ಸಾಮಾಗ್ರಿ, ತರಕಾರಿ, ಮೀನು ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮನೆಯಿಂದ ಸೋಮವಾರ ಸಂಜೆ ನಗರಕ್ಕೆ ಆಗಮಿಸಿದರು. […]