ಕುಂದಾಪುರ:ಬೋಟಿನಲ್ಲಿ ಮಲಗಿದಲ್ಲಿಯೇ ಕಾರ್ಮಿಕ ಸಾವು

ಕುಂದಾಪುರ: ಮೀನುಗಾರ ಕಾರ್ಮಿಕನೋರ್ವ ಬೋಟಿನಲ್ಲಿ ಮಲಗಿದಲ್ಲಿಯೇ ಸಾವನ್ನಪ್ಪಿದ ಘಟನೆ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಶನಿವಾರ ನಡೆದಿದೆ. ಪಶ್ಚಿಮ ಬಂಗಾಳದ ನಿವಾಸಿ ಬಿನೋಯ್ ಬಿಶ್ವಾಸ್ (೩೫) ಮೃತಪಟ್ಟ ಕಾರ್ಮಿಕ. ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಅಗಸ್ತೇಶ್ವರ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ವಿಪರೀತ ಕುಡಿತದ ಚಟ ಹೊಂದಿದ್ದನು. ಮೀನುಗಾರಿಕೆ ಇಲ್ಲದೆ ಕಳೆದ ಒಂದು ವಾರದಿಂದ ಬೋಟಿನಲ್ಲಿಯೇ ಇದ್ದ ಈತ ಶನಿವಾರ ಬೆಳಿಗ್ಗೆ ಬೋಟಿನ ಕ್ಯಾಬಿನ್ ಒಳಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ. ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು […]