ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೊರೆ ಹೋದ ನಟಿ ಜೂಹಿ ಚಾವ್ಲ: ಕಾರಣವೇನು ಗೊತ್ತಾ?

ನವದೆಹಲಿ:5 ಜಿ ತರಂಗಾಂತರಗಳಿಂದ ಮನುಷ್ಯನ ಆರೋಗ್ಯದ ಮೇಲೆಯೂ ಸೇರಿದಂತೆ ಇಡೀ ದೇಶದ ಪ್ರಾಕೃತಿಕ ಸಂಪನ್ಮೂಲಗಳ ಮೇಲೆಯೂ ಹಾನಿಯಾಗಲಿದೆ. ಜೀವ ವೈವಿದ್ಯಗಳಿಗೂ 5 ಜಿ ಮಾರಕ ಎನ್ನುವ ಮಾಹಿತಿಗಳು ತಜ್ಞರುಗಳಿಂದ ಕೇಳೀ ಬರುತ್ತಿರುವ ಬೆನ್ನಲ್ಲೇ ಇದೀಗ ರೇಡಿಯೊಫ್ರೀಕ್ವೆನ್ಸಿ (ಆರ್ ಎಫ್) ವಿಕಿರಣಗಳ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿರುವ ಬಾಲಿವುಡ್ ನಟಿ ಜೂಹಿ ಚಾವ್ಲ ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. 5 ಜಿ ತಂತ್ರಜ್ಞಾನ ಜಾರಿಯಾದಲ್ಲಿ ಅದರಿಂದ ಈಗಿರುವ ವಿಕರಣಗಳಿಗಿಂತ 10-100 ಪಟ್ಟು ಹೆಚ್ಚಿನ ಆರ್ […]
ಕೋವಿಡ್ -19 ಮಾರ್ಗಸೂಚಿ ಪಾಲಿಸದ ಸಂಸ್ಥೆಗಳ ನೋಂದಣಿ ರದ್ದು

ಉಡುಪಿ : ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಕೆ.ಪಿ.ಎಂ.ಇ ನವೀಕರಣ ಮಾಡದ ಹಾಗೂ ಕೋವಿಡ್-19 ಮಾರ್ಗಸೂಚಿ ಪಾಲಿಸದ ಉಡುಪಿ ತಾಲೂಕಿನ 16, ಕುಂದಾಪುರ ತಾಲೂಕಿನ 3 ಹಾಗೂ ಕಾರ್ಕಳ ತಾಲೂಕಿನ 7 ಸಂಸ್ಥೆಗಳ ನೋಂದಣಿಯನ್ನು ಕೆ.ಪಿ.ಎಮ್.ಇ ಹಾಗೂ ಎಪಿಡೆಮಿಕ್ ಕಾಯ್ದೆ ಅನ್ವಯ ರದ್ದುಪಡಿಸಲಾಗಿದೆ ಎಂದು ಜಿಲ್ಲಾ ಕೆ.ಪಿ.ಎಮ್.ಇ ಕಮಿಟಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ ತಾಲೂಕು ಪತ್ರಕರ್ತರಿಗೆ ಕಿಟ್ ವಿತರಣೆ

ಕಾರ್ಕಳ: ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ರಿ. ಕಾರ್ಕಳ ಇದರ ಅಧ್ಯಕ್ಷರಾದ ನೆಮೀರಾಜ್ ಅರಿಗ ರವರು ಕಾರ್ಕಳ ದ ಪ್ರವಾಸಿ ಮಂದಿರದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರಿಗೆ ಕಿಟ್ ವಿತರಣಾ ಸಮಾರಂಭ ಇಂದು ನಡೆಯಿತು. ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ಕಾರ್ಕಳ ಇದರ ಅಧ್ಯಕ್ಷರಾದ ನೆಮೀರಾಜ್ ಅರಿಗ ಮಾತನಾಡಿ ವಿದ್ಯುತ್, ರಸ್ತೆ ಹಾಗೂ, ನೀರಾವರಿ ವ್ಯವಸ್ಥೆಗಳು ಒಂದು ತಾಲೂಕಿನ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅದರಲ್ಲಿ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. […]
ಹಲ್ಲಿನ ಆರೈಕೆಯಲ್ಲಿ ಕೇರ್ ಲೆಸ್ ಮಾಡ್ಬೇಡಿ:ಇಲ್ಲಿದೆ ಹಲ್ಲಿನ ಆರೋಗ್ಯ ಕಾಪಾಡಲು ಬೊಂಬಾಟ್ ಟಿಪ್ಸ್

ಆರೋಗ್ಯಕರವಾದ, ಸುಂದರ, ಸ್ವಚ್ಛ ಹಲ್ಲುಗಳನ್ನು ಪಡೆಯುವುದು ಎಲ್ಲರ ಇಚ್ಛೆ. ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಎಲ್ಲರೂ ಬೆಳಿಗ್ಗೆ ಎದ್ದ ತಕ್ಷಣ ಬ್ರಶ್ ಮಾಡುವುದು ರೂಢಿ. ಆದರೆ ರಾತ್ರಿ ಮಲಗುವ ಮುನ್ನ ಬ್ರಶ್ ಮಾಡುವುದು ತುಂಬಾ ಮುಖ್ಯ. ರಾತ್ರಿ ಹೊತ್ತಲ್ಲಿ ನಾವು ಸೇವಿಸಿದ ಆಹಾರ ಹಲ್ಲಿನಲ್ಲಿ ಸಿಲುಕಿಕೊಂಡಾಗ ಬ್ಯಾಕ್ಟೀರಿಯಾಗಳು ಆಹಾರದ ಭಾಗಗಳನ್ನು ಸೇವಿಸಲು ಆರಂಭಿಸುತ್ತದೆ. ಇದರಿಂದ ಹಲ್ಲುಗಳು ಕೊಳೆಯಲು ಪ್ರಾರಂಭವಾಗುತ್ತದೆ, ಮಾತ್ರವಲ್ಲದೆ ಬಾಯಿಯ ದುರ್ವಾಸನೆ ಹೆಚ್ಚುತ್ತದೆ. ಇನ್ನು ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ […]