ಪ್ರಜಾಪ್ರಭುತ್ವ ಉಳಿಯಲು ಮಾಧ್ಯಮಗಳೇ ಕಾರಣ ಬಿ.ಎಲ್.ಶಂಕರ್

ಬ್ರಹ್ಮಾವರ : ಸಂವಿಧಾನದ ನಾಲ್ಕನೇ ಅಂಗವಾದ ಇಂದಿನ ಪತ್ರಿಕೋದ್ಯಮದಲ್ಲಿ ಬದಲಾವಣೆ ಆಗಿದೆ. ಪ್ರಜಾಪ್ರಭುತ್ವ ಉಳಿಯಲು ಮಾಧ್ಯಮಗಳೇ ಕಾರಣ ಎಂದು ಹಿರಿಯ ರಾಜಕಾರಣಿ ಬಿ.ಎಲ್.ಶಂಕರ್ ಹೇಳಿದರು. ಬ್ರಹ್ಮಾವರದ ಬಂಟರ ಭವನದಲ್ಲಿ ಭಾನುವಾರ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪ್ರಸಕ್ತ ಕಾಲಘಟದಲ್ಲಿ ಪತ್ರಿಕೋದ್ಯಮ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ಸಂಸ್ಕೃತಿಯ ಪ್ರಜಾಪ್ರಭುತ್ವ ನಮ್ಮ ದೇಶದಲ್ಲಿ ಬಲವಾಗಿದೆ. ಬೇರೆ ಯಾವ ದೇಶದಲ್ಲೂ ನಾವು ಇದನ್ನು ಕಾಣಲಾರೆವು. ಸ್ವಾತಂತ್ರ್ಯ ಪೂರ್ವದಲ್ಲಿ೩,೩೦೦ ಪತ್ರಿಕೆಗಳಿದ್ದು, ಇದೀಗ ೧೦೦ಭಾಷೆಗಳಲ್ಲಿ ೬೦ಸಾವಿರ ಪತ್ರಿಕೆಗಳು […]