ಬ್ರಹ್ಮಾವರ: ಬೇಕರಿ ಓವನ್ ಸ್ಪೋಟ: ಮಾಲೀಕ ಸಾವು

ಬ್ರಹ್ಮಾವರ: ಇಲ್ಲಿನ ಮಾಬುಕಳದ ಬೇಕರಿಯೊಂದರ ಓವನ್ ಸ್ಪೋಟಗೊಂಡ ಪರಿಣಾಮ ಬೇಕರಿ ಮಾಲೀಕ ರಾಬರ್ಟ್ ಪುಟಾರ್ಡೊ ಸ್ಥಳದಲ್ಲೇ ಮೃತಟ್ಟಿದ್ದಾರೆ. ದೊಡ್ಡ ಗಾತ್ರದ ಓವನ್ ಸ್ಪೋಟಗೊಂಡಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.