ದ.ಕ-ಉಡುಪಿ ಜಿಲ್ಲೆಯಲ್ಲಿ ಇಂದು ಕರೆಂಟ್ ಇರಲ್ಲ; ಮೆಸ್ಕಾಂ ಮನವಿ ಏನು ಗೊತ್ತಾ?

ಮಂಗಳೂರು/ಉಡುಪಿ: ಮೆಸ್ಕಾಂ (MESCOM) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಜುಲೈ 21ರಂದು ಕರಾವಳಿಯ ಮಂಗಳೂರು, ಉಡುಪಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಸಮಯದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ. ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ? ಮೆಸ್ಕಾಂ ಪ್ರಕಟಣೆಯ ಪ್ರಕಾರ, ನಿರ್ವಹಣಾ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ನಿಗದಿತ ಅವಧಿಯಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಮಂಗಳೂರು: ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ […]
ಜುಲೈ 28 ರಂದು ಕೈತೋಟ ತರಬೇತಿ ಕಾರ್ಯಕ್ರಮ

ಮಂಗಳೂರು: ಸಿರಿ ತೋಟಗಾರಿಕೆ ಸಂಘ (ರಿ) (ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆ), ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಆವರಣ, ಬೆಂದೂರು, ಮಂಗಳೂರು ಇದರ ವತಿಯಿಂದ ಕೈತೋಟ ತರಬೇತಿ ಕಾರ್ಯಕ್ರಮವನ್ನು ಜುಲೈ 28 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ರವರೆಗೆ ಬೆಂದೂರು ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ತರಬೇತಿ ಕಾರ್ಯಕ್ರಮದಲ್ಲಿ ಪಾಟಿಂಗ್, ರೀಪಾಟಿಂಗ್, ಕಸಿ ಕಟ್ಟುವುದು (ಗ್ರಾಪ್ಟಿಂಗ್, ಬಡ್ಡಿಂಗ್, ಲೇಯರಿಂಗ್), ಸಾವಯವ ಗೊಬ್ಬರ ತಯಾರಿ, ತಾರಸಿ ಕೃಷಿಯ ಕುರಿತು ತರಬೇತಿ […]
ಮಂಗಳೂರು ನಗರ/ ಗ್ರಾಮಾಂತರ: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ನಗರ) ವ್ಯಾಪ್ತಿಯ 7 ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಹಾಗೂ 32 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ 4 ಅಂಗನವಾಡಿ ಕಾರ್ಯಕರ್ತೆ ಹಾಗೂ 39 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು […]
“ನಥಿಂಗ್” ಅನ್ನೋ ಹಾಗಿಲ್ಲ ಈ ಮೊಬೈಲ್ ನಲ್ಲಿದೆ ಎವೆರಿಥಿಂಗ್: ಫೋನ್ (4ಬಿ) ಸ್ಮಾರ್ಟ್‍ಫೋನ್

ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ವಿಶಿಷ್ಟ ವಿನ್ಯಾಸ ಹಾಗೂ ತಂತ್ರಜ್ಞಾನದ ಮೂಲಕ ಗಮನ ಸೆಳೆದಿರುವ ಲಂಡನ್ ಮೂಲದ ಗ್ರಾಹಕ ತಂತ್ರಜ್ಞಾನ ಸಂಸ್ಥೆಯಾದ ಬ್ರ್ಯಾಂಡ್ ನಥಿಂಗ್, ತನ್ನ ಬಹುನಿರೀಕ್ಷಿತ ಫೋನ್ (4ಬಿ) ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನಥಿಂಗ್ ತಂತ್ರಜ್ಞಾನದ ಹೊಸ ಅನುಭವವನ್ನು ನೀಡಲು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಭಾರಿ ಯಶಸ್ಸು ಕಂಡಿದ್ದ ಫೋನ್ (4ಎ) ಸರಣಿಯ ಮುಂದುವರಿದ ಭಾಗವಾಗಿ ಇದನ್ನು ಪರಿಚಯಿಸಲಾಗಿದೆ. ಕಂಪನಿಯ ಸಿಗ್ನೇಚರ್ ವಿನ್ಯಾಸ, ದೈನಂದಿನ ಶಕ್ತಿಯುತ ಕಾರ್ಯಕ್ಷಮತೆ, […]
ಪ್ಲಾಸ್ಟಿಕ್ ಚೀಲಕ್ಕೆ ಹೇಳಿ ಗುಡ್ ಬೈ… ಪರಿಸರ ಕಾಳಜಿ ನಮ್ಮಿಂದ ಆರಂಭವಾಗಲಿ

ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ: ಇಂದು ಒಂದು ಚೀಲ ಬದಲಿಸಿದರೆ, ನಾಳೆ ಒಂದು ಭೂಮಿ ಉಳಿಯುತ್ತದೆ. ನಿಮ್ಮ ಮಕ್ಕಳ ಭವಿಷ್ಯವನ್ನು ಯೋಚಿಸಿಯಾದರೂ ಪ್ಲಾಸ್ಟಿಕ್ ಬಳಕೆ ತ್ಯಜಿಸಿ. ಮಕ್ಕಳಿಗೆ ಜನ್ಮ ನೀಡುವುದು ಮಾತ್ರ ಕರ್ತವ್ಯವಲ್ಲ. ಮಕ್ಕಳಿಗೋಸ್ಕರ ಪರಿಸರ, ಗಾಳಿ ಶುದ್ಧವಾಗಿಡುವುದೂ ನಮ್ಮ ಮುಖ್ಯ ಕರ್ತವ್ಯ. ಪ್ರತಿ ವರ್ಷ ಜುಲೈ 3ರಂದು ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ (International Plastic Bag Free Day)ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ಚೀಲಗಳ ಅತಿಯಾದ ಬಳಕೆಯಿಂದ ಪರಿಸರ, ಜಲಚರಗಳು, ಪ್ರಾಣಿಗಳು […]