ಉಡುಪಿ ಸೀರೆ ನೇಯ್ಗೆ ಮತ್ತು ತರಬೇತಿಯ ಸಮಾರೋಪ ಸಮಾರಂಭ

ಕಾರ್ಕಳ:ಕದಿಕೆ ಟ್ರಸ್ಟ್ ಕಾರ್ಕಳ,ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ನಬಾರ್ಡ್ ಪ್ರಾಯೋಜಕತ್ವದಲ್ಲಿ ನಡೆಸಿದ 150 ದಿನಗಳ ಉಡುಪಿ ಸೀರೆ ನೇಯ್ಗೆ ಮತ್ತು ಇತರ ತರಬೇತಿಯ ಸಮಾರೋಪ ಸಮಾರಂಭ ತಾಳಿಪಾಡಿ ನೇಕಾರ ಸಂಘದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ನಬಾರ್ಡ್ ಡಿ ಡಿ ಎಂ ಸಂಗೀತ ಕರ್ತಾ ಅವರು ಮಾತನಾಡಿ, ನವ ನೇಕಾರರಿಗೆ ಶುಭಹಾರೈಸಿ ಕದಿಕೆ ಟ್ರಸ್ಟ್ ನಡೆಸಿದ ಯಶಸ್ವೀ ಕಾರ್ಯಕ್ರಮವನ್ನು ಶ್ಲಾಘಿಸಿದರು. ಕಿನ್ನಿಗೋಳಿ ಯೂನಿಯನ್ ಬ್ಯಾಂಕ್ ಚೀಫ್ ಮ್ಯಾನೇಜರ್  ಜೆರಾಲ್ಡ್ ರೇಗೊ ಮಾತನಾಡಿ, ನವ ನೇಕಾರರಿಗೆ ತಮ್ಮ ಬ್ಯಾಂಕಿನಿಂದ ಸಿಗುವ ಸವಲತ್ತುಗಳ […]