ಸರಕಾರ ಜಾರಿಗೊಳಿಸುವ ಹೊಸ ಕಾಯ್ದೆಯಿಂದ ಸಹಕಾರಿ ಕ್ಷೇತ್ರದ ಒತ್ತಡ ಹೆಚ್ಚಿದೆ: ಜಯಕರ ಶೆಟ್ಟಿ
ಉಡುಪಿ: ಸರಕಾರ ಜಾರಿಗೊಳಿಸುವ ಹೊಸ ಹೊಸ ಕಾಯ್ದೆ ಹಾಗೂ ವಿವಿಧ ತೆರಿಗೆ ಸಹಕಾರಿ ಕ್ಷೇತ್ರದ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಎಲ್ಲ ಸಹಕಾರಿಗಳು ಸಂಘಟಿತರಾಗಿ ಸಮಸ್ಯೆಯ ವಿರುದ್ಧ ಹೋರಾಡಬೇಕು. ಆಗ ಮಾತ್ರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರಿ ಯೂನಿಯನ್, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಸಹಕಾರಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಕೃಷಿ ಪತ್ತಿನ ಹಾಗೂ ಪತ್ತಿನ […]