ಉಡುಪಿ: ರೈಲ್ವೇ ಟ್ರ್ಯಾಕ್ ಬಳಿ ಅಗ್ನಿ ಅವಘಡ

ಉಡುಪಿ: ಇಂದ್ರಾಳಿಯ ರೈಲ್ವೇ ಟ್ರ್ಯಾಕ್ ಬಳಿ ಶನಿವಾರ ರಾತ್ರಿ ವೇಳೆ ಅಗ್ನಿ ಅವಘಡ ಸಂಭವಿಸಿದೆ.ನಿಲ್ದಾಣದ ಅನತಿ ದೂರದಲ್ಲಿ ಮರಗಳನ್ನು ಕಡಿದು ಹಾಕಲಾಗಿದ್ದು, ಇಲ್ಲಿದ್ದ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಯಾರಿಗೂ ಹಾನಿ ಉಂಟಾಗಿಲ್ಲ.