ನಿವೃತ್ತಿ ವೇತನ ಪಡೆಯಲು ಆನ್‌ಲೈನ್ ಅರ್ಜಿ ಕಡ್ಡಾಯ ವಿರೋಧಿಸಿ ಪ್ರತಿಭಟನೆ

ಉಡುಪಿ: ಭವಿಷ್ಯ ನಿಧಿ (ಪಿ.ಎಫ್) ಹಣ ಮತ್ತು ನಿವೃತ್ತಿ ವೇತನ ಪಡೆಯಲು ಅರ್ಜಿಗಳನ್ನುಆನ್‌ಲೈನ್ ಮೂಲಕವೇ ಸಲ್ಲಿಸಲು ಕಡ್ಡಾಯಗೊಳಿಸಿರುವ ಕ್ರಮವನ್ನು ಖಂಡಿಸಿ ಹಾಗೂ 2015ರ ಮೊದಲಿನಂತೆ ಲಿಖಿತ ರೂಪದಲ್ಲಿ ಅರ್ಜಿ ಸ್ವೀಕರಿಸುವ ಕ್ರಮವನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಪಿಎಫ್ ಸಮಸ್ಯೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಗುರುವಾರ ಉಡುಪಿ ಪಿಎಫ್ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.ಪಿಎಫ್ ದಾಖಲೆ ಆಧಾರ ಕಾರ್ಡಿಗೆ ಅನುಗುಣವಾಗಿ ತಿದ್ದುಪಡಿ ಮಾಡಲು ಅವಕಾಶ ನೀಡಬೇಕು.ಕಾರ್ಮಿಕರಲ್ಲಿಲ್ಲದ ದಾಖಲೆಗಳನ್ನು ಕೇಳಿ ಕಾರ್ಮಿಕರನ್ನು ಸತಾಯಿಸುವುದು, ಮಾನಸಿಕವಾಗಿಹಿಂಸಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು. […]