ಸುನಾಮಿ ಬಂದರೆ ಏನ್ ಮಾಡ್ಬೇಕು?:ಮಲ್ಪೆಯಲ್ಲಿ ಅಣುಕು ಪ್ರದರ್ಶನ

ಉಡುಪಿ:  ಸುನಾಮಿ ಮುಂತಾದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳು ಮತ್ತು ಸಂಬಂದಪಟ್ಟ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಕುರಿತ ಅಣುಕು ಪ್ರದರ್ಶನ ಶನಿವಾರ ಮಲ್ಪೆಯ ಹನುಮಾನ್ ಭಜನಾ ಮಂದಿರದ ಬಳಿ ನಡೆಯಿತು. ಅಣಕು ಪ್ರದರ್ಶನದಲ್ಲಿ ಬೆಳಗ್ಗೆ 10.40 ಕ್ಕೆ ಸುನಾಮಿ ಕುರಿತ ಎಚ್ಚರಿಕೆ  ಸ್ವೀಕರಿಸಿದ ಕೂಡಲೇ 2 ನಿಮಿಷದ ಅವಧಿಯಲ್ಲಿ ಉಡುಪಿ ಅಗ್ನಿಶಾಮಕ ಇಲಾಖೆಯ 2 ವಾಹನಗಳು ಸಮುದ್ರ ತೀರದ ಜನರಿಗೆ ಸೈರನ್ ಮೂಲಕ ಎಚ್ಚರಿಕೆ ನೀಡುತ್ತಾ, ಸಮುದ್ರ ತೀರಕ್ಕೆ ಆಗಮಿಸಿದವು, […]