ಕೃಷಿ ಕಾಯಿದೆ ತಿದ್ದುಪಡಿ ಮಸೂದೆಯ ಮೂಲಕ ರೈತರ ಬೆನ್ನುಮೂಳೆ ಮುರಿಯುವ ಯತ್ನ: ಉಡುಪಿ ಜಿಲ್ಲಾ ಕಾಂಗ್ರೆಸ್

ಉಡುಪಿ: ಕೃಷಿ ಕಾಯಿದೆ ತಿದ್ದುಪಡಿ ಮಸೂದೆಯ ಮೂಲಕ ದೇಶದ ಬೆನ್ನೆಲುಬಾಗಿರುವ ರೈತರ ಬೆನ್ನುಮೂಳೆ ಮುರಿಯುವ ಕೇಂದ್ರದ ಧಮನಕಾರಿ ನಿಲುವು ಅಸಾಂವಿಧಾನಿಕವಾಗಿದ್ದು ಇದರ ವಿರುದ್ಧ ನಡೆಯುವ ರೈತ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ. ದಿ.27ರಂದು ರೈತ ಸಂಘಟನೆಗಳು ಕರೆಕೊಟ್ಟ ಭಾರತ ಬಂದ್ ಮುಷ್ಕರ ಕಾರ್ಯಕ್ರಮವನ್ನು ಒಂದು ರಾಷ್ಟ್ರೀಯ ಆಂದೋಲನವನ್ನಾಗಿಸಿ ಯಶಸ್ವಿಗೊಳಿಸಿ ಕೇಂದ್ರ ಸರಕಾರವನ್ನು ಎಚ್ಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಸೋಮವಾರದ ಬಾರತ್ ಬಂದ್ ಕಾರ್ಯಕ್ರಮದಲ್ಲಿ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು […]