ಉಡುಪಿ ಹೆಲಿಪ್ಯಾಡಿಗೆ ಆಗಮಿಸಿದ ರಾಹುಲ್ ಗಾಂಧಿ – ಕಾಂಗ್ರೆಸ್ ನಾಯಕರಿಂದ ಅದ್ದೂರಿ ಸ್ವಾಗತ

ಉಡುಪಿ: ಮೀನುಗಾರರೊಂದಿಗೆ ಸಂವಾದ ನಡೆಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಉಡುಪಿಯ ಆದಿ ಉಡುಪಿ ಹೆಲಿಪ್ಯಾಡಿಗೆ ಆಗಮಿಸಿದರು. ಶಿವಮೊಗ್ಗದಿಂದ ಉಡುಪಿಗೆ ಆಗಮಿಸಿದ ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ಮುಖಂಡರು ಅದ್ದೂರಿ ಸ್ವಾಗತ ಕೋರಿದರು. ಆದಿಉಡುಪಿಯಿಂದ ಉಚ್ಚಿಲದ ಮಹಾಲಕ್ಷ್ಮೀ ದೇವಳಕ್ಕೆ ಝೀರೋ ಟ್ರಾಫಿಕ್ ಮೂಲಕ ತೆರಳಿದರು. ದೇವಸ್ಥಾನ ಭೇಟಿಯ ಬಳಿಕ ಉಚ್ಚಿಲ ಮಹಾಲಕ್ಷ್ಮೀ ಸಭಾಭವನದಲ್ಲಿ ಮೀನುಗಾರರ ಜೊತೆ ಸಂವಾದ ಆಯೋಜನೆ ಆಗಿದ್ದು ಸಂವಾದ ನಡೆಸಲಿದ್ದಾರೆ. ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದರು. ಅನಂತರ ಬಿಗು ಭದ್ರತೆಯಲ್ಲಿ ಕಾಪು ಕ್ಷೇತ್ರಕ್ಕೆ […]