ಪೋಕ್ಸೋ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ

ಉಡುಪಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯವು 3 ವರ್ಷ ಜೈಲುಶಿಕ್ಷೆ ವಿಧಿಸಿ ಮಂಗಳವಾರ ಆದೇಶಿಸಿದೆ. ಗೋವಿಂದ ನಾಯ್ಕ ಶಿಕ್ಷೆಗೆ ಗುರಿಯಾಗಿರುವ ಆರೋಪಿ. 2021ರ ಮಾ. 2ರಂದು ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ 13ವರ್ಷ ವಯಸ್ಸಿನ ಬಾಲಕಿಯು ಆರೋಪಿ ಗೋವಿಂದ ನಾಯ್ಕನ ಅಂಗಡಿಗೆ ಬಿಸ್ಕೆಟ್ ಖರೀದಿಸಲು ಹೋಗಿದ್ದಳು. ಈ ವೇಳೆ ಆರೋಪಿ ಬಾಲಕಿಗೆ ಬಿಸ್ಕೆಟ್ ನೀಡಿ, ಜ್ಯೂಸ್ ಕೊಡುವುದಾಗಿ ಹೇಳಿ ಅಂಗಡಿ ಒಳಗೆ […]