ಗೂಡ್ಸ್ ರಿಕ್ಷಾ ಢಿಕ್ಕಿ: ಸ್ಕೂಟರ್ ಸವಾರನಿಗೆ ಗಾಯ..!!

ಉಡುಪಿ: ಗೂಡ್ಸ್ ರಿಕ್ಷಾ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಸಂತೆಕಟ್ಟೆಯ ಮಹೇಶ್ ಕೋತ್ವಾಲ್ ಕೆ.ಅವರು ಮನೆಯಿಂದ ಉಡುಪಿ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ಪುತ್ತೂರು ಗ್ರಾಮದ ಗೋಪಾಲಪುರ ಬಳಿ ಗೂಡ್ಸ್ ರಿಕ್ಷಾ ಚಾಲಕ ಕರುಣಾಕರ ಮೂಲ್ಯ ತನ್ನ ರಿಕ್ಷಾವನ್ನು ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾರೆ. ಈ ವೇಳೆ ಅವರು ಸ್ಕೂಟರ್ ಸಹಿತ ಕೆಳಕ್ಕೆ ಬಿದ್ದಿದ್ದಾರೆ. ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.