ಉಡುಪಿ, ದ.ಕ. ಸಹಿತ ರಾಜ್ಯದ 8 ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ: ರಾಜ್ಯಕ್ಕೆ ಮತ್ತೆ ಕೊರೊನಾ ಕಂಟಕ.!

ಬೆಂಗಳೂರು: ನೆರೆಯ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದಲ್ಲೂ ಸೋಂಕು ಭೀತಿ ಉಂಟಾಗಿದೆ. ರಾಜ್ಯದ 8 ಜಿಲ್ಲೆಗಳು ರೆಡ್ ಝೋನ್ಗೆ ತಲುಪಿವೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ಪ್ರಮುಖ 8 ಜಿಲ್ಲೆಗಳಲ್ಲಿ ನಿತ್ಯ ಪಾಸಿಟಿವಿಟಿ ರೇಟ್ ಏರಿಕೆ ಕಾಣುತ್ತಿದ್ದು, ಕಳೆದ ಒಂದು ವಾರದ ಪಾಸಿಟಿವಿಟಿ ದರದ ಏರಿಕೆಯಲ್ಲಿ 8 ಜಿಲ್ಲೆಗಳು ಮುಂಚೂಣಿಯಲ್ಲಿವೆ. ಜಿಲ್ಲೆ (ಪಾಸಿಟಿವಿಟಿ ರೇಟ್) ದಕ್ಷಿಣ ಕನ್ನಡ-3.26 ಉಡುಪಿ-2.63 ಕೊಡಗು-2.00 ಚಿಕ್ಕಮಗಳೂರು-1.95 ಹಾಸನ-1.71 ಶಿವಮೊಗ್ಗ-1.39 ಮೈಸೂರು-1.23 ಉತ್ತರ ಕನ್ನಡ-1.00 ಎಲ್ಲಾ […]
ಸಿಂಪಲ್ಲಾಗಿ ಇಂಗ್ಲೀಷ್ ಕಲೀರಿ:ಈ ವಾರದ ಇಂಗ್ಲೀಷ್ ಕ್ಲಾಸ್ ಕೇಳಿ

ನಿಮಗೆ ಬೇಗ ಬೇಗ ಇಂಗ್ಲೀಷ್ ಕಲಿಬೇಕು, ಇಂಗ್ಲೀಷ್ ನಲ್ಲಿ ಪಟ ಪಟ ಅಂತ ಮಾತಾಡ್ಬೇಕು ಅಂತ ಆಸೆ ಇರಬಹುದು. ಅದಕ್ಕಾಗಿ ನೀವು ದುಬಾರಿ ಇಂಗ್ಲೀಷ್ ಸ್ಪೀಂಕಿಂಗ್ ಕ್ಲಾಸ್ ಮೊರೆಹೋಗಬೇಕಾಗಿಲ್ಲ. ಕಾರ್ಕಳದ ಉಪನ್ಯಾಸಕ ಮಹೇಶ್ ಶೆಣೈ ಅವರು ಸುಲಭವಾಗಿ ನಿಮಗೆ ಕನ್ನಡದಲ್ಲೇ ಇಂಗ್ಲೀಷ್ ಪಾಠ ಮಾಡ್ತಾರೆ. ಕೆಳಗಿನ ಲಿಂಕ್ ಒತ್ತಿ ಈ ವಾರದ ಇಂಗ್ಲೀಷ್ ಕ್ಲಾಸ್ ಗೆ ಎಂಟ್ರಿ ಆಗಿ https://youtu.be/IUoKN1DZYNc
ಉಡುಪಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಜಿಲ್ಲಾಧ್ಯಕ್ಷರ ಪದಗ್ರಹಣಕ್ಕೆ ಇಬ್ಬರು ಶಾಸಕರು ಗೈರು

ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಇಂದು ನಗರದ ಕಿದಿಯೂರು ಹೋಟೆಲ್ ನಲ್ಲಿ ನಡೆದ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಪದಗ್ರಹಣ ಸಮಾರಂಭಕ್ಕೆ ಜಿಲ್ಲೆಯ ಐವರು ಶಾಸಕರ ಪೈಕಿ ಇಬ್ಬರು ಶಾಸಕರು ಗೈರಾಗುವ ಮೂಲಕ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಮಾರಂಭಕ್ಕೆ ಗೈರಾಗಿದ್ದು, ಆ ಮೂಲಕ ತಮ್ಮೊಳಗೆ ಕುದಿಯುತ್ತಿದ್ದ ಅಸಮಾಧಾನದ ಜ್ವಾಲೆಯನ್ನು ಹೊರಹಾಕಿದ್ದಾರೆ. […]
ಗ್ರಾಮಕರಣಿಕರ ಹುದ್ದೆ ನೇಮಕಾತಿಯಲ್ಲಿ ಆಮಿಷಕ್ಕೆ ಒಳಗಾಗಬೇಡಿ: ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ: ಉಡುಪಿ ಜಿಲ್ಲೆಯಲ್ಲಿ 2019 ನೇ ಸಾಲಿನ ಗ್ರಾಮಕರಣಿಕರ ಹುದ್ದೆಗೆ ನೇರ ನೇಮಕಾತಿ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಸರಕಾರದ ಮಾರ್ಗಸೂಚಿಯಡಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಪರಿಗಣಿಸಿ, ನೇರ ನೇಮಕಾತಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ನೇಮಕಾತಿ ಪ್ರಕ್ರಿಯೆಯಲ್ಲಿ ನೇರ ಸಂದರ್ಶನ, ಲಿಖಿತ ಪರೀಕ್ಷೆ ಇತ್ಯಾದಿಗಳು ಇರುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮೂಲಕ ಆನ್‍ಲೈನ್ ಅರ್ಜಿಯನ್ನು ಸಲ್ಲಿಸುವಂತೆ ಹಾಗೂ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯುವುದರಿಂದ ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳ ಆಮೀಷಕ್ಕೆ ಒಳಗಾಗದಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. […]
ಬಿ.ಎಡ್, ಡಿ.ಎಡ್ ಕೋರ್ಸ್‍ಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ
ಉಡುಪಿ, ಜುಲೈ 22: 2019-20 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ )ಸಮುದಾಯದ ವಿದ್ಯಾರ್ಥಿಗಳಿಗೆ ಬಿ.ಎಡ್ ಹಾಗೂ ಡಿ.ಎಡ್ ಕೋರ್ಸ್‍ಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಆಫ್‍ಲೈನ್ ಅರ್ಜಿಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ವೆಬ್‍ಸೈಟ್ https://gokdom.kar.nic.in ಅಥವಾ https://dom.karnataka.gov.in/udupi ರಿಂದ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಸೂಚಿಸಲಾದ ಎಲ್ಲಾ ದಾಖಲಾತಿಗಳೊಂದಿಗೆ ಆಗಸ್ಟ್ 31 ರ ಒಳಗೆ ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: […]