ಜೂನಿಯರ್ ರೆಡ್‌ಕ್ರಾಸ್ ಕೌನ್ಸಿಲರ್‌ಗಳಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ, ಪರಿಪೋಷಣಂ ಯೋಜನೆಯಡಿ ಅಂತರ್ಗತ ಪ್ರೌಢಶಾಲೆಗಳ ಜೂನಿಯರ್ ರೆಡ್‌ಕ್ರಾಸ್ ಕೌನ್ಸಿಲರ್‌ಗಳಿಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನದ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ಮಂಗಳವಾರ ನಗರದ ಅಜ್ಜರಕಾಡು ರೆಡ್‌ಕ್ರಾಸ್ ಭವನದಲ್ಲಿ ನಡೆಯಿತು. ರಾಜ್ಯ ಶಾಖೆಯ ಆಡಳಿತ ಮಂಡಳಿಯ ಸದಸ್ಯ ವಿ.ಜಿ. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಆರೋಗ್ಯ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ಬೇರೆಯವರ ಕಷ್ಟಗಳಿಗೆ ಸ್ವಂದಿಸುವ […]

ಕಾರ್ಕಳದ ಅತ್ತೂರು ಬೆಸಿಲಿಕಾ ಚರ್ಚಿನಲ್ಲಿ ಸಂಭ್ರಮದ ವಾರ್ಷಿಕೋತ್ಸವಾಚರಣೆಗಳು ಪ್ರಾರಂಭ

ಕಾರ್ಕಳ: ಫೆ.20, ಭಾನುವಾರದಂದು, ಅತ್ತೂರಿನ ಸಂತ ಲಾರೆನ್ಸ್ ಮೈನರ್ ಬೆಸಿಲಿಕಾದ ವಾರ್ಷಿಕ ಉತ್ಸವದ ಆಚರಣೆಗಳು ಸಂಭ್ರಮದಿಂದ ಆರಂಭವಾಯಿತು. ಜನವರಿ ಕೊನೆಯ ವಾರದಲ್ಲಿ ನಡೆಯಬೇಕಿದ್ದ ವಾರ್ಷಿಕ ಹಬ್ಬವನ್ನು ಕೋವಿಡ್ ಭೀತಿಯಿಂದಾಗಿ ಮುಂದೂಡಲಾಗಿತ್ತು. ಭಾನುವಾರ ಬೆಳಗ್ಗೆ ಧ್ವಜಾರೋಹಣದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಬೆಳಗಿನ ಜಾವ ನಡೆದ ಹಬ್ಬದ ಪವಿತ್ರ ಆಚರಣೆಯ ಅಧ್ಯಕ್ಷತೆಯನ್ನು ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಡಾ.ಫ್ರಾನ್ಸಿಸ್ ಸೆರಾವೋ ವಹಿಸಿದ್ದರೆ, ಸಂಜೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಿದ್ದರು.   […]

ಉಡುಪಿಯ ಪೃಥ್ವಿ ಏಜೆನ್ಸಿಸ್‌ನಲ್ಲಿ ದೀಪಾವಳಿ ಧಮಾಕ; ಗೃಹೋಪಕರಣ ಮತ್ತು ಪೀಠೋಪಕರಣಗಳ ಮೇಲೆ ಭರ್ಜರಿ ಆಫರ್

ಉಡುಪಿ: ನಗರದ ಕಿನ್ನಿಮೂಲ್ಕಿ ಯಲ್ಲಿರುವ ಗೃಹೋಪಕರಣ ಮತ್ತು ಪೀಠೋಪಕರಣಗಳ ಬೃಹತ್ ಮಳಿಗೆ ಪೃಥ್ವಿ ಏಜೆನ್ಸಿಸ್‌ನಲ್ಲಿ ದೀಪಾವಳಿ ಆಫರ್ ಸೇಲ್ ಅನ್ನು ಆಯೋಜಿಸಲಾಗಿದ್ದು ಭರ್ಜರಿ ಆಫರ್ ಗಳು ಇಲ್ಲಿ ನಿಮಗಾಗಿ ಕಾದಿವೆ. ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಇನ್ನಷ್ಟು ರಂಗು ನೀಡಲು ಪೃಥ್ವಿ ಏಜೆನ್ಸಿಸ್ ರೆಡಿಯಾಗಿದೆ. ಏನೇನು ಆಫರ್? ಡಬಲ್ ವುಡನ್ ಕಾಟ್ ರೂ 7,500 , 3+1 ಸೋಫಾಸೆಟ್ 10,000 ರೂ., ಕಾರ್ನರ್ ಪ್ಯಾಕ್ 1,500 ರೂ, ಬುಕ್ ಬ್ಯಾಕ್ 2,999 ರೂ., ಕಂಪ್ಯೂಟರ್ ಚೆಯರ್‌ 2,500 […]

ಉಡುಪಿ, ದ.ಕ. ಸಹಿತ ರಾಜ್ಯದ 8 ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ: ರಾಜ್ಯಕ್ಕೆ ಮತ್ತೆ ಕೊರೊನಾ ಕಂಟಕ.!

ಬೆಂಗಳೂರು: ನೆರೆಯ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದಲ್ಲೂ ಸೋಂಕು ಭೀತಿ ಉಂಟಾಗಿದೆ. ರಾಜ್ಯದ 8 ಜಿಲ್ಲೆಗಳು ರೆಡ್ ಝೋನ್​ಗೆ ತಲುಪಿವೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ಪ್ರಮುಖ 8 ಜಿಲ್ಲೆಗಳಲ್ಲಿ ನಿತ್ಯ ಪಾಸಿಟಿವಿಟಿ ರೇಟ್ ಏರಿಕೆ ಕಾಣುತ್ತಿದ್ದು, ಕಳೆದ ಒಂದು ವಾರದ ಪಾಸಿಟಿವಿಟಿ ದರದ ಏರಿಕೆಯಲ್ಲಿ 8 ಜಿಲ್ಲೆಗಳು ಮುಂಚೂಣಿಯಲ್ಲಿವೆ. ಜಿಲ್ಲೆ (ಪಾಸಿಟಿವಿಟಿ ರೇಟ್) ದಕ್ಷಿಣ ಕನ್ನಡ-3.26 ಉಡುಪಿ-2.63 ಕೊಡಗು-2.00 ಚಿಕ್ಕಮಗಳೂರು-1.95 ಹಾಸನ-1.71 ಶಿವಮೊಗ್ಗ-1.39 ಮೈಸೂರು-1.23 ಉತ್ತರ ಕನ್ನಡ-1.00 ಎಲ್ಲಾ […]

ಸಿಂಪಲ್ಲಾಗಿ ಇಂಗ್ಲೀಷ್ ಕಲೀರಿ:ಈ ವಾರದ ಇಂಗ್ಲೀಷ್ ಕ್ಲಾಸ್ ಕೇಳಿ

ನಿಮಗೆ ಬೇಗ ಬೇಗ ಇಂಗ್ಲೀಷ್ ಕಲಿಬೇಕು, ಇಂಗ್ಲೀಷ್ ನಲ್ಲಿ ಪಟ ಪಟ ಅಂತ ಮಾತಾಡ್ಬೇಕು ಅಂತ ಆಸೆ ಇರಬಹುದು. ಅದಕ್ಕಾಗಿ ನೀವು ದುಬಾರಿ ಇಂಗ್ಲೀಷ್ ಸ್ಪೀಂಕಿಂಗ್ ಕ್ಲಾಸ್ ಮೊರೆಹೋಗಬೇಕಾಗಿಲ್ಲ. ಕಾರ್ಕಳದ ಉಪನ್ಯಾಸಕ ಮಹೇಶ್ ಶೆಣೈ ಅವರು ಸುಲಭವಾಗಿ ನಿಮಗೆ ಕನ್ನಡದಲ್ಲೇ ಇಂಗ್ಲೀಷ್ ಪಾಠ ಮಾಡ್ತಾರೆ.  ಕೆಳಗಿನ ಲಿಂಕ್ ಒತ್ತಿ ಈ ವಾರದ ಇಂಗ್ಲೀಷ್  ಕ್ಲಾಸ್ ಗೆ ಎಂಟ್ರಿ ಆಗಿ https://youtu.be/IUoKN1DZYNc