ರಂಗರಂಗು – ಮಕ್ಕಳ ಬೇಸಿಗೆ ಶಿಬಿರ

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಸೊಸೈಟಿ ಹಾಗೂ ಸಮುದಾಯ ಸಾಂಸ್ಕೃತಿಕ ಸಂಘಟನೆ (ರಿ) ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ರಂಗರಂಗು- ಮಕ್ಕಳ ಉಚಿತ ಬೇಸಿಗೆ ಶಿಬಿರವು ಮೇ 1 ರ ವರೆಗೆ ಕುಂದಾಪುರ ಬಾಲಭವನ ಸಭಾಭವನದಲ್ಲಿ ನಡೆಯಲಿದೆ. ಶಿಬಿರದಲ್ಲಿ 05 ರಿಂದ 16 ವರ್ಷದೊಳಗಿನ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು, ವಿಕಲಚೇತನರು, ಹೆಚ್.ಐ.ವಿ ಸೋಂಕು ಪೀಡಿತ ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ […]
ಆಕ್ಷೇಪಣೆ ಆಹ್ವಾನ

ಉಡುಪಿ: ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಇವರು ಮಣಿಪಾಲ-ಪೆರಂಪಳ್ಳಿ ರಸ್ತೆಯ 4 ನೇ ಅಡ್ಡ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ ಶಾಖಾ ಕಟ್ಟಡಕ್ಕೆ ಹೋಗುವ ರಸ್ತೆಗೆ ಓಂ ಶಾಂತಿ ರಸ್ತೆ ಎಂದು ಹಾಗೂ ಅದಮಾರು ಮಠದ ನರಹರಿ ಪೀಠಮ್ ವ್ಯವಸ್ಥಾಪಕರು ದೀನದಯಾಳ್ ವೃತ್ತ ಚಿತ್ತರಂಜನ್ ಸರ್ಕಲ್‌ನಿಂದ ಹೋಟೆಲ್ ವುಡ್‌ಲ್ಯಾಂಡ್ ಮೂಲಕ ರಥಬೀದಿ ತಲುಪುವ ಮಾರ್ಗಕ್ಕೆ ಶ್ರೀ ಶ್ರೀ ವಿಭುಧಪ್ರಿಯ ಮಾರ್ಗ ಎಂದು ನಾಮಕರಣಗೊಳಿಸಲು ಉದ್ದೇಶಿಸಿರುತ್ತಾರೆ. ಈ ಕುರಿತು ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ 30 ದಿನಗಳ ಒಳಗೆ ನಗರಸಭಾ […]
ಶ್ರೀಕೃಷ್ಣಮಠದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಉಡುಪಿ: ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ,ನೃತ್ಯ ವಿದುಷಿ ಮಂಜರಿಚಂದ್ರ ಪುಷ್ಪರಾಜ್ ಇವರ ಶಿಷ್ಯೆ ಕುಮಾರಿ ಎಸ್.ಅನಘಶ್ರೀ ಇವರಿಂದ ನೃತ್ಯಾಭಿವಂದನ ಅಂಗವಾಗಿ ಭರತನಾಟ್ಯ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ಕಲಾವಿದರಾದ ಕೋಟ ಭಗವತ್ ಭಜನಾ ತಂಡದಿಂದ ಕೋಲಾಟ ನೃತ್ಯ ಮತ್ತು ಉದಯಾಸ್ತಮಾನ ಭಜನಾ ಕಾರ್ಯಕ್ರಮಗಳು ನಡೆದವು.
ಆಚಾರ್ಯಾಸ್ ಏಸ್ : ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ

9-10 ನೇ ತರಗತಿ, ಪಿಯುಸಿ, ಸಿಇಟಿ, ಜೆಇಇ, ನೀಟ್, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡುತ್ತಿರುವ ಉಡುಪಿಯ ಏಸ್ ವತಿಯಿಂದ ಮೇ ಮೊದಲ ವಾರದಿಂದ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ಆಯೋಜಿಸಲಾಗಿದೆ. ಮೇ 6ನೇ ತಾರೀಖಿನಿಂದ ಪ್ರತೀ ಶನಿವಾರ ಅಪರಾಹ್ನ 4 ರಿಂದ 6 ರ ವರೆಗೆ ಮತ್ತು ಭಾನುವಾರದಂದು ಬೆಳಿಗ್ಗೆ 9 ರಿಂದ ಸಂಜೆ 4 ರ ವರೆಗೆ ತರಬೇತಿ ನೀಡಲಾಗುತ್ತದೆ. ಕಳೆದ 7 ವರ್ಷಗಳಿಂದ ಪರಿಣಾಮಕಾರಿ ತರಬೇತಿ ಮೂಲಕ ಸಾವಿರಕ್ಕೂ ಮಿಕ್ಕಿ […]
ನಗರಸಭಾಧ್ಯಕ್ಷರಿಂದ ಮಲೇರಿಯಾ ನಿಯಂತ್ರಣ ಜನಜಾಗೃತಿ ಜಾಥಾಕ್ಕೆ ಚಾಲನೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಮತ್ತು ಪೌರಾಡಳಿತದ ಸಹಯೋಗದಲ್ಲಿ “ವಿಶ್ವ ಮಲೇರಿಯಾ ದಿನ” ದ ಅಂಗವಾಗಿ, ಮದರ್ ಆಫ್ ಸಾರೋಸ್ ಚರ್ಚ್ ಆವರಣದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿಯ ಆವರಣದವರೆಗೆ ನಡೆದ ಜಾಥಾ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಮದರ್ ಆಫ್ ಸಾರೋಸ್ ಚರ್ಚಿನ ಫಾದರ್, ಜಿಲ್ಲಾ ರೋಗವಾಹಕ […]