ವಿವಿಧ ಔಷಧಗಳ ಖರೀದಿಗೆ ರೂ.880 ಕೋಟಿ: ಸಚಿವ ಎಚ್ ಕೆ ಪಾಟೀಲ

ಬೆಂಗಳೂರು: 2025–26ರ ಸಾಲಿಗೆ ರೂ.880.68 ಕೋಟಿ ವೆಚ್ಚದಲ್ಲಿ 890 ಔಷಧಗಳು, ಮಾತ್ರೆಗಳು, ರಾಸಾಯನಿಕ ಗಳನ್ನು ಖರೀದಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಭೆ ಬಳಿಕ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ, ‘ಔಷಧಗಳ ದರ ಪರಿಗಣನೆಗಾಗಿ ಪ್ರಸಕ್ತ ಔಷಧಿಗಳಿಗೆ ಅನ್ವಯಿಸುವ ಹಿಂದಿನ ದರ, ಅಂದಾಜು ದರವನ್ನು ಆಧಾರವಾಗಿಟ್ಟುಕೊಂಡು ಹೊಸ ದರ ನಿರ್ಧರಿಸಲಾಗಿದೆ. ಹೊಸ ಔಷಧಗಳಿಗೆ ಅನ್ವಯಿಸುವ ಇತರೆ ರಾಜ್ಯಗಳ ವೈದ್ಯಕೀಯ ಸರಬರಾಜು ನಿಗಮಗಳಲ್ಲಿ ಖರೀದಿಸಿದ ಕನಿಷ್ಠ ದರ ಗಳು ಅಥವಾ ಮಾರುಕಟ್ಟೆಯ […]