ಉಡುಪಿ: ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಮಲ್ಪೆ ಬೀಚ್‌ನಲ್ಲಿ ಝುಂಬಾ ಸೆಷನ್.

ಮಣಿಪಾಲ: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಎಂಡೋಕ್ರೈನಾಲಜಿ (ಅಂತಃಸ್ರಾವಶಾಸ್ತ್ರ) ವಿಭಾಗದ ಸಹಯೋಗದೊಂದಿಗೆ ಮಲ್ಪೆ ಬೀಚ್‌ನಲ್ಲಿ ಝುಂಬಾ ಸೆಷನ್ (ವ್ಯಾಯಾಮ ಚಟುವಟಿಕೆ) ನಡೆಸಲಾಯಿತು. ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಮಾತನಾಡಿ, ಝುಂಬಾ ಚಟುವಟಿಕೆಯಂತಹ ವ್ಯಾಯಾಮವು ಮಧುಮೇಹ ತಡೆಗಟ್ಟುವಿಕೆ ಮಾಡಲು ಜನರಿಗೆ ಸಹಾಯ ಮಾಡಲಿದೆ. ದೈನಂದಿನ ಚಟುವಟಿಕೆಗೂ ಇದು ಅತ್ಯಗತ್ಯವಾಗಿದೆ. ಆರೋಗ್ಯಕರ, ಮಧುಮೇಹ-ಮುಕ್ತ ಭವಿಷ್ಯಕ್ಕೆ ಇದೊಂದು ಮಹತ್ತರ ಹೆಜ್ಜೆಯಾಗಿದೆ ಎಂದರು. ಎಂಡೋಕ್ರೈನಾಲಜಿ ವಿಭಾಗದ ಪ್ರಾಧ್ಯಾಪಕಿ […]