ಉಡುಪಿ: ಯುವ ಉದ್ಯಮಿ ನೇಣಿಗೆ ಶರಣು

ಉಡುಪಿ: ವೈಯಕ್ತಿಕ ಕಾರಣದಿಂದ ಮನ ನೊಂದ ಉಡುಪಿಯ ಯುವ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ಅಂಬಲಪಾಡಿಯ ಮಜ್ಜಿಗೆ ಪಾದೆ ಎಂಬಲ್ಲಿ ನಡೆದಿದೆ. ಮೃತರನ್ನು ಉಡುಪಿಯ ಗುರುಕೃಪಾ ಟ್ರೇಡರ್ಸ್‌ನ ಮಾಲಕ ಹಾಗೂ ಸುರೇಶ್ ಪೈಯವರ ಪುತ್ರ ಕಾರ್ತಿಕ್ ಪೈ ಎಂದು ಗುರುತಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.