ಯೋಗಾಸನ ಸ್ಪರ್ಧೆಯಲ್ಲಿ ಸುಷ್ಮಾ ತೆಂಡುಲ್ಕರ್ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಉಡುಪಿ: ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಎಸ್ ಜಿ ಎಸ್ ಅಂತರಾಷ್ಟ್ರೀಯ ಯೋಗ ಸಂಸ್ಥೆ ಬೆಂಗಳೂರು ಇದರ ವತಿಯಿಂದ ನಡೆದಂತಹ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ 20 ರಿಂದ 30 ವಯೋಮಿತಿಯ ವಿಭಾಗದಲ್ಲಿ ಸುಷ್ಮಾ ತೆಂಡುಲ್ಕರ್ ಗೋವಿಂದೂರು ಯರ್ಲಪಾಡಿ ಅವರು ಭಾಗವಹಿಸಿ ಆರನೇ ಸ್ಥಾನವನ್ನು ಗಳಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ನರೇಂದ್ರ ಕಾಮತ್ ಕಾರ್ಕಳ ಹಾಗೂ ಅಶೋಕ್ ಇವರು ಯೋಗ ತರಬೇತಿಯನ್ನು ನೀಡಿರುತ್ತಾರೆ