ಯತ್ನಾಳ್ ಉಚ್ಚಾಟನೆ ವಿಚಾರ; ಪಕ್ಷದ ತೀರ್ಮಾನದಲ್ಲಿ ಯಾವುದೇ ವ್ಯತ್ಯಾಸ, ಗೊಂದಲ ಇಲ್ಲ- ಶಾಸಕ ಯಶ್ ಪಾಲ್

ಉಡುಪಿ: ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಬಗ್ಗೆ ನಮ್ಮ ಕರಾವಳಿ ಭಾಗದಲ್ಲಿ ಯಾವುದೇ ಗೊಂದಲ ಇಲ್ಲ. ಕೇಂದ್ರದ ನಾಯಕರು ಶಿಸ್ತು ಸಮಿತಿ ಮೂಲಕ ನಿರ್ಧಾರ ಕೈಗೊಂಡಿದ್ದಾರೆ. ಪಕ್ಷದ ತೀರ್ಮಾನದಲ್ಲಿ ಯಾವುದೇ ವ್ಯತ್ಯಾಸ, ಗೊಂದಲ ಇಲ್ಲ. ಪಕ್ಷದ ತೀರ್ಮಾನಕ್ಕೆ ಶಾಸಕನಾಗಿ ನಾನು ಬದ್ಧನಾಗಿದ್ದೇನೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು. ಯತ್ನಾಳ್ ಉಚ್ಚಾಟನೆ ವಿಚಾರಕ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ವರಿಷ್ಠರು ತೀರ್ಮಾನ ತೆಗೆದುಕೊಳ್ಳುವಾಗ ಸಾಧಕ ಬಾಧಕ ತಿಳಿದುಕೊಂಡಿರುತ್ತಾರೆ. ಯತ್ನಾಳ್ ಅವರು ನೋಟೀಸ್ ಗೆ ಸರಿಯಾಗಿ ಉತ್ತರ […]