ಯಕ್ಷಗಾನ ಪ್ರದರ್ಶನದ ವೇಳೆ ತುಂಡಾಗಿ ಬಿದ್ದ ದೇವಿಯ ತೊಟ್ಟಿಲು; ಯಕ್ಷಪ್ರೇಮಿಗಳ ಅಸಮಾಧಾನ

ಉಡುಪಿ: ಯಕ್ಷಗಾನವನ್ನು ಆರಾಧನಾ ಕಲೆ ಎಂದು ಕರೆಯುತ್ತಾರೆ. ಇಂತಹ ವಿಶಿಷ್ಟ ಕಲೆಯಲ್ಲಿ ಕೆಲವೊಮ್ಮೆ ಕಲಾವಿದರು ಮಾಡುವ ಅದ್ವಾನಗಳಿಂದ ಪ್ರೇಕ್ಷಕರಿಗೂ, ಭಕ್ತರಿಗೂ ಘಾಸಿಯಾಗುತ್ತದೆ. ಕಲಾವಿದನೊಬ್ಬನ ಅತಿರೇಕದ ಪ್ರದರ್ಶನದಿಂದ ನೋಡುಗರಿಗೆ ಆಘಾತವಾದ ವಿಡಿಯೋ ಒಂದು ಸದ್ಯ ವೈರಲಾಗುತ್ತಿದೆ. ದೇವಿ ಮಹಾತ್ಮ ಪ್ರಸಂಗವನ್ನು ಅತ್ಯಂತ ಶೃದ್ಧೆ, ಭಕ್ತಿಗಳಿಂದ ಭಕ್ತರು ಆಯೋಜಿಸುತ್ತಾರೆ.ಹರಕೆ ಹೊತ್ತು ಸಸ್ಯಹಾರಿಗಳಾಗಿ ಮನೆಯಲ್ಲಿ ಪೂಜೆ, ಅನ್ನ ಸಂತರ್ಪಣೆ ನಡೆಸಿ ಯಕ್ಷಗಾನ ಏರ್ಪಡಿಸುತ್ತಾರೆ. ದೇವಿ ಮಹಾತ್ಮ ಪ್ರಸಂಗದ ವೇಳೆ ಉಯ್ಯಾಲೆಯಲ್ಲಿ ತಾಯಿ ತೂಗುವುದನ್ನು ಕಂಡು ಭಾವುಕರಾಗುತ್ತಾರೆ . ಇಂತಹ ಅಪರೂಪದ ಸನ್ನಿವೇಶದಲ್ಲಿ […]