ಉಡುಪಿಯ ಯಕ್ಷಗಾನ ಕಲಾರಂಗದಿಂದ ಮಕ್ಕಳಿಗೆ ವಿಶೇಷ ತರಬೇತಿ

ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯವರು, ಮಕ್ಕಳಿಗೆ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸಂಸ್ಥೆಯವರು ಹೈಸ್ಕೂಲ್ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. ಪ್ರತಿ ಶಾಲೆಯಿಂದ ಆಯ್ದ 60 ಮಕ್ಕಳ ತಂಡಕ್ಕೆ ಒಂದು ವಾರದ ವಿಶೇಷ ಯಕ್ಷಗಾನ ಶಿಬಿರ ಏರ್ಪಡಿಸಿದ್ದಾರೆ. ಯಕ್ಷಗಾನದ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಳವೆಯಲ್ಲೇ ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ 16 ಗಂಟೆಗಳಿಗೂ ಅಧಿಕ ಕಾಲ ಯಕ್ಷಗಾನದ ಕುಣಿತ ವೇಷಭೂಷಣ ಮಾತುಗಾರಿಕೆ ಕಲಿಸುವುದರ ಜೊತೆಗೆ ಜೀವನ […]