ಯಕ್ಷಗಾನ ಅಕಾಡೆಮಿಯಿಂದ ಕಲಾವಿದರಿಗಾಗಿ ಕಲಾಪಗಳು: ಯಕ್ಷಗಾನವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕಲಾವಿದರ ಮೇಲಿದೆ; ಡಾ.ತಲ್ಲೂರು

ಉಡುಪಿ: ಹಿಂದೆ ಶ್ರದ್ಧಾಭಕ್ತಿಯಿಂದ ಕಲಾವಿದರು ವೃತ್ತಿಪರರಾಗಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿದರು. ಇಂದು ಈ ಕ್ಷೇತ್ರಕ್ಕೆ ವೈದ್ಯರು, ಇಂಜೀನಿಯರ್, ಶಿಕ್ಷಕರು ಸೇರಿದಂತೆ ಉನ್ನತ ಶಿಕ್ಷಣ ಪಡೆದ ಮಂದಿ ಕಲೆಯ ತೇರನ್ನು ಮುಂದೆಳೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ ಮತ್ತೊಂದೆಡೆ ಯಕ್ಷಗಾನ ತನ್ನ ಸಾಂಪ್ರಾದಾಯಿಕ ಚೌಕಟ್ಟನ್ನು ಮೀರುತ್ತಿದೆ ಎಂಬ ದೂರುಗಳು ಕೂಡಾ ಅಕಾಡೆಮಿಯ ಕದವನ್ನು ತಟ್ಟುತ್ತಿವೆ. ಆದ್ದರಿಂದ ಈ ಸಂಕ್ರಮಣ ಕಾಲದಲ್ಲಿ ಯಕ್ಷಗಾನ ಕಲೆಯ ಗರಿಮೆಗೆ ಚ್ಯುತಿ ಬಾರದಂತೆ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯಕ್ಷಗಾನ ಕಲಾವಿದರ ಮೇಲಿದೆ ಎಂದು […]