ಉಡುಪಿ:ಸಾಹಿತಿ ವೈ.ಕೆ. ಸಂಧ್ಯಾಶರ್ಮ ‘ಕಲಾಪ್ರವೀಣ’ ಪ್ರಶಸ್ತಿಗೆ ಆಯ್ಕೆ

ಉಡುಪಿ: ಕನ್ನಡದ ಹಿರಿಯ ಕಾದಂಬರಿಕಾರ್ತಿ, ಸಾಹಿತಿ, ರಂಗ ಕರ್ಮಿ ಹಾಗೂ ವಿಮರ್ಶಕಿ ವೈ.ಕೆ. ಸಂಧ್ಯಾ ಶರ್ಮ ಅವರನ್ನು 2025ನೇ ಸಾಲಿನ ಹಿರಿಯ ಪತ್ರಕರ್ತ, ವಿಮರ್ಶಕ ದಿ.ಈಶ್ವರಯ್ಯ ಅನಂತಪುರ ಹೆಸರಿನಲ್ಲಿ ನೀಡುವ ‘ಕಲಾ ಪ್ರವೀಣ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಮುಖ ಹೆಸರಾದ ಸಂಧ್ಯಾಶರ್ಮ ಅವರು ಖ್ಯಾತ ಲೇಖಕಿಯಾಗಿರುವ ಜೊತೆಗೆ ಅಂಕಣ ಬರಹಗಾರ್ತಿ, ನೃತ್ಯ ನಾಟಕ ಗಳ ವಿಮರ್ಶಕಿ ಕೂಡ ಆಗಿದ್ದಾರೆ. ಕೂಚುಪುಡಿ ನೃತ್ಯ ಕಲಾವಿದೆಯಾಗಿರುವ ಇವರು ಸಂಗೀತ ವಿಮರ್ಶೆಯಲ್ಲೂ ಪಳಗಿದವರು. ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿಯೂ ಸೇವೆ […]