ಉಡುಪಿ: ಗಾಯಗೊಂಡಿದ್ದ ಬಿಳಿಗೂಬೆಯನ್ನು ರಕ್ಷಿಸಿ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರ.

ಉಡುಪಿ: ನಗರದ ಕಿದಿಯೂರು ಹೋಟೆಲ್ ಸಮೀಪದ ಕಟ್ಟಡವೊಂದರ ಬಳಿ ಮಂಗನ ದಾಳಿಯಿಂದ ಗಾಯಗೊಂಡು ಬಿದ್ದಿದ್ದ ಬಿಳಿಗೂಬೆಯನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿದ್ದಾರೆ. ಹಾರಲಾರದ ಸ್ಥಿತಿಯಲ್ಲಿದ್ದ ಗೂಬೆಯನ್ನು ರಕ್ಷಿಸಿದ ನಿತ್ಯಾನಂದ ಅವರು,ಬಳಿಕ ಅದನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.