ಉಡುಪಿ: ವಾಲಿಬಾಲ್ ತಂಡದಿಂದ ವಿದ್ಯಾರ್ಥಿಗಳನ್ನು ಕೈಬಿಟ್ಟಿರುವುದನ್ನು ವಿರೋಧಿಸಿ ದ.ಸಂ.ಸ ಪ್ರತಿಭಟನೆ

ಉಡುಪಿ: ರಾಷ್ಟ್ರೀಯ ವಾಲಿಬಾಲ್ ಪಂದ್ಯಕೂಟಕ್ಕೆ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದ ದಲಿತ ವಿದ್ಯಾರ್ಥಿ ಸುಜಿತ್ ಮತ್ತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿ ಜಸೀರ್’ನನ್ನು ಜಿಲ್ಲಾಧಿಕಾರಿ ಅವರ ಶಿಫಾರಸಿನ ಮೇರೆಗೆ ಕೈಬಿಡಲಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಜಿಲ್ಲಾಧಿಕಾರಿಯ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕುಂದಾಪುರದ ರಾಜಕೀಯ ವ್ಯಕ್ತಿಯ ಪ್ರಭಾವಕ್ಕೆ ಮಣಿದು ಇಬ್ಬರು ಪ್ರತಿಭಾವಂತ ಆಟಗಾರರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ […]