ಉಡುಪಿ ಜಿಲ್ಲಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಸಂಸ್ಥೆಯ ನೂತನ ಗೌರವಾಧ್ಯಕ್ಷರಾಗಿ ಸಂದೇಶ್ ಬಲ್ಲಾಳ್, ಅಧ್ಯಕ್ಷರಾಗಿ ವಿವೇಕ್ ಸುವರ್ಣ ಆಯ್ಕೆ

ಉಡುಪಿ:ಉಡುಪಿಯ ಜಿಲ್ಲಾ ಮೊಬೈಲ್ ರಿಟೈಲರ್ಸ್ ಅಸೋಯೇಷನ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆಪ್ಟಂಬರ್ 3 ರಂದು ಉಡುಪಿಯ ಟೌನ್ ಹಾಲ್ ನಲ್ಲಿ ನಡೆಯಲಿದೆ. ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ಸ್ ಅಸೋಯೇಷನ್ ಇದರ ನೂತನ ಗೌರವಾಧ್ಯಕ್ಷರಾಗಿ ಉಡುಪಿ ಬಲ್ಲಾಲ್ ಮೊಬೈಲ್ಸ್ ಮಾಲಕರಾದ ಶ್ರೀ ಸಂದೇಶ್ ಬಲ್ಲಾಳ್ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ರಾಜೇಶ್ ಮೆಬಿಯನ್, ಸಲೀಂ, ಪ್ರಶಾಂತ್ ಕಿಣಿ ಆಯ್ಕೆಯಾಗಿದ್ದಾರೆ. ಅಸೋಸಿಯೇಷನ್ನಿನ ನೂತನ ಅಧ್ಯಕ್ಷರಾಗಿ ವಿವೇಕ್ ಜಿ ಸುವರ್ಣ, ಕಾರ್ಯದರ್ಶಿಯಾಗಿ ಖಾದರ್,ಖಜಾಂಚಿಯಾಗಿ ಇಮ್ರಾನ್, ಜೊತೆ ಕಾರ್ಯದರ್ಶಿಯಾಗಿ ಸುದರ್ಶನ್ ಆಯ್ಕೆಯಾಗಿದ್ದಾರೆ. […]