ಉಡುಪಿ: ಸುಂಟರಗಾಳಿಯ ಹೊಡೆತಕ್ಕೆ ಧರೆಗುರುಳಿದ ಪುತ್ತಿಗೆ ದೇವಸ್ಥಾನದ ಧ್ವಜಸ್ತಂಭ

ಉಡುಪಿ: ಉಡುಪಿಯಲ್ಲಿ ಬೀಸಿದ ಸುಂಟರಗಾಳಿ ಸಹಿತ ಮಳೆಗೆ ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನದ ಧ್ವಜಸ್ತಂಭ ಮುರಿದು ಬಿದ್ದಿದೆ. ಹಿರಿಯಡ್ಕ ಸಮೀಪದ ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ. ರಥೋತ್ಸವಕ್ಕೂ ಎಲ್ಲಾ ಏರ್ಪಾಟು ಮಾಡಿಕೊಳ್ಳಲಾಗಿತ್ತು. ಈ ಸಂದರ್ಭ ಏಕಾಏಕಿ ಸುಂಟರಗಾಳಿ ಬೀಸಿದ್ದು, ವಿಪರೀತ ಗಾಳಿಗೆ ದೇವಸ್ಥಾನದ ಮುಂಭಾಗದ ಧ್ವಜಸ್ಥಂಭ ತುಂಡಾಗಿ ಬಿದ್ದಿದೆ. ರಥ ಕೂಡ ಗಾಳಿಗೆ ವಾಲಿದ್ದು, ಈ ಸಂದರ್ಭ ಪ್ರಧಾನ ಅರ್ಚಕರು ದೇವರ ಉತ್ಸವ ಮೂರ್ತಿಯನ್ನು ರಥದೊಳಗೇ ಹಿಡಿದು ಕುಳಿತಿದ್ದರು. ಸುಮಾರು ನೂರು ವರ್ಷದ ಹಿಂದೆ […]