ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.24ರಂದು ವಿಜಯದಶಮಿ ಆಚರಣೆ.

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾವಿರಾರು ಮಂದಿ ಭಕ್ತರು ದೇಗುಲಕ್ಕೆ ಆಗಮಿಸಿ, ದೇವರ ಪ್ರಸಾದವನ್ನು ಪಡೆದರು. ಶ್ರೀ ಕ್ಷೇತ್ರದಲ್ಲಿ ಅ.23ರಂದು ರಾತ್ರಿ ಶಾರದಾ ವಿಸರ್ಜನೆ, ಕನ್ನಿಕಾ ಪೂಜೆ, ಮಹಾಮಂತ್ರಾಕ್ಷತೆ ಹಾಗೂ ಅ.24ರಂದು ವಿಜಯದಶಮಿ ಆಚರಣೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ|ಕಟ್ಟೆರವಿರಾಜ ವಿ. ಆಚಾರ್ಯ ತಿಳಿಸಿದ್ದಾರೆ.