ಉಡುಪಿ: ವಿಡಿಯೋ ಕಾಲ್‌ನಲ್ಲಿ ಬೆದರಿಸಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ; ಪ್ರಕರಣ ದಾಖಲು

ಉಡುಪಿ, ಅ.23: ಮಹಿಳೆಯೊಬ್ಬರಿಗೆ ವಾಟ್ಸಾಪ್ ವಿಡಿಯೋ ಕಾಲ್‌ನಲ್ಲಿ ಅರೆಸ್ಟ್ ಮಾಡುವುದಾಗಿ ಬೆದರಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.25ರಂದು ಅಪರಿಚಿತ ವ್ಯಕ್ತಿಯೊಬ್ಬರು ಪ್ರಮೀಳಾ (39) ಎಂಬವರಿಗೆ ಕರೆ ಮಾಡಿ, ನಿಮ್ಮ ಹೆಸರಿಗೆ ಪಾರ್ಸೆಲ್ ಕಳುಹಿಸಿದ್ದು ಪಾರ್ಸೆಲ್ ನಲ್ಲಿ 8 ಕ್ರೆಡಿಟ್ ಕಾರ್ಡ್ ಮತ್ತು 700 ಗ್ರಾಂ ಡ್ರಗ್ಸ್ ಇರುವುದಾಗಿ ತಿಳಿಸಿದ್ದನು. ತಮ್ಮ ಮೇಲೆ ಎಫ್‌ಐಆರ್ ದಾಖಲಾಗಿರುವುದಾಗಿ ತಿಳಿಸಿದ್ದು, ನಂತರ ತಾನು ಬಾಂಬೆ ಸೈಬರ್ ಕ್ರೈಂ ಬ್ರಾಂಚ್ ಕಾಲ್ ಕನೆಕ್ಟ್ ಮಾಡಿರುವುದಾಗಿ […]