ಉಡುಪಿ: ಹಿರಿಯ ರಂಗಕರ್ಮಿ ಪ್ರೊ.ರಾಮದಾಸ್ ನಿಧನ

ಉಡುಪಿ: ಶ್ರೇಷ್ಠ ನಾಟಕಕಾರ ಕವಿ ಸಾಹಿತಿ ರಂಗನಟ ನಿರ್ದೇಶಕರಾದ ಉಡುಪಿಯ ಪ್ರೊ. ರಾಮದಾಸ್ (86) ಇಂದು ಮುಂಜಾನೆ ನಿಧನರಾದರು. ರಂಗಭೂಮಿ ಉಡುಪಿಯ ರಂಗನಟರಾಗಿ, ನಿರ್ದೇಶಕರಾಗಿ ಇವರ ಕೊಡುಗೆ ಅಪಾರವಾದುದು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಇವರು ಕಾಲೇಜಿನ ಹಾಗೂ ಉಡುಪಿಯ ಸಾಂಸ್ಕೃತಿಕ, ಸಾಹಿತ್ಯ ರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದರು. ರಂಗಭೂಮಿ (ರಿ.) ಉಡುಪಿಯ ಓರ್ವ ಮುಖ್ಯ ಕಲಾವಿದರಾಗಿ ವೀರ ಪುರೂರವ, ಧರ್ಮಚಕ್ರ, ಸಂಕ್ರಾಂತಿ, ನಾಯೀಕತೆ, ಹರಕೆಯ ಕುರಿ , ಓಡಿಸ್ಸಿ, ಸಾಕ್ಷಾತ್ಕಾರ, ಸೂರ್ಯ ಶಿಕಾರಿ .. […]