ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪ್ರದರ್ಶನ

ಕುಂದಾಪುರ: ಸೆಪ್ಟೆಂಬರ್ 04 ರಂದು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಯ ಅನಾವರಣಕ್ಕಾಗಿ ಸಾಂಸ್ಕೃತಿಕ ತೇರು, ಕಲೆಗಳ ಮೇರು ಶೀರ್ಷಿಕೆಯಡಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನೆರವೇರಿತು. ದೀಪ ಪ್ರಜ್ವಲನೆಯ ಜೊತೆಗೆ ಸಾಂಸ್ಕೃತಿಕ ತೇರನ್ನು ಎಳೆಯುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆ ಜಗದಗಲ ಪಸರಿಸುವಂತಾಗಲಿ ಎನ್ನುವ ಆಶಯದೊಂದಿಗೆ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಯಾವ ವ್ಯಕ್ತಿಗೆ ಕಲೆ, ಸಾಹಿತ್ಯದ ಬಗ್ಗೆ ಅರಿವಿರುವುದಿಲ್ಲವೋ ಅವರು ಪಶುವಿಗೆ ಸಮಾನ. ಶ್ರೀ ವೆಂಕಟರಮಣ ವಿದ್ಯಾಸಂಸ್ಥೆ ಓದು […]