ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಕಾರ್ಯಾಲಯ ಉದ್ಘಾಟನೆ

ಉಡುಪಿ: ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಸಂಕಲ್ಪದಂತೆ, ಉಡುಪಿ ಶ್ರೀಕೃಷ್ಣ ಮಠದ ಆವರಣದ ಶ್ರೀರಾಮಧಾಮದಲ್ಲಿ 2019 ದಶಂಬರ 13 ,14 ,15 ರಂದು ನಡೆಯಲಿರುವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಕಾರ್ಯಾಲಯವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥಶ್ರೀಪಾದರು ಉದ್ಘಾಟನೆ ಮಾಡಿದರು. ತುಳು ಶಿವಳ್ಳಿ ಸಂಸ್ಕೃತಿಯನ್ನು ಜಗದಗಲಕೆ ಪರಿಚಯಿಸುವ ಈ ಸಮ್ಮೇಳನದಲ್ಲಿ ದೇಶ ವಿದೇಶಗಳಲ್ಲಿರುವ ಶಿವಳ್ಳಿ ಬ್ರಾಹ್ಮಣರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಶ್ರೀಗಳು ತಿಳಿಸಿದರು. ಸಮ್ಮೇಳನದ ರೂಪುರೇಷೆಯನ್ನು ಕೆ ಬಾಲಕೃಷ್ಣ ಮಡಮಂತ್ತಾಯ ತಿಳಿಸಿದರು. […]