ಪರಿಸರ ಮಾಲಿನ್ಯವಾದರೆ ಸೂಕ್ತ ಕಾನೂನು ಕ್ರಮ: ನಂದಿಕೂರು ಎಂ11 ಕಂಪನಿಗೆ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

ಉಡುಪಿ: ಪರಿಸರ ಅಧಿಕಾರಿಗಳ ಪರೀಕ್ಷಾ ವರದಿಗನುಗುಣವಾಗಿ ಅವರ ಸೂಚನೆಯನ್ನು ಕಂಪನಿ ಪಾಲಿಸಬೇಕು. ತಪ್ಪಿದ್ದಲ್ಲಿ ಕಂಪನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು, ನಂದಿಕೂರಿನಲ್ಲಿ ಕಾರ್ಯಚರಿಸುತ್ತಿರುವ ಎಂ.11 ಕಂಪನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರ ದೂರಿನನ್ವಯ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಸಹಿತ ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಸೇರಿಸಿಕೊಂಡು ಎಂ11 ಕಂಪನಿಯೊಳಗೆ ಪರೀಶಿಲನೆ ನಡೆಸಿ ಬಳಿಕ ಕಂಪನಿಯ ಹಾಲ್ ವೊಂದರಲ್ಲಿ ತುರ್ತು ಸಭೆ ನಡೆಸಿ ಮಾತನಾಡಿದರು. ಅಡುಗೆ ಎಣ್ಣೆಯನ್ನು […]