ಉಡುಪಿ ನಗರಸಭೆ ಚುನಾವಣೆ :ಪರಿಷ್ಕೃತ ಚುನಾವಣಾ ಅಧಿಕಾರಿಗಳ ನೇಮಕ

ಉಡುಪಿ: ಉಡುಪಿ ನಗರಸಭೆಯ ಅಧ್ಯಕ್ಷಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ (ಮಹಿಳೆ),ಚುನಾವಣಾ ಅಧಿಕಾರಿಯಾಗಿ ಕುಂದಾಪುರ ಉಪವಿಭಾಗದ ಸಹಾಯಕ ಕಮೀಷನರ್ ಮಹೇಶ್‌ಚಂದ್ರ ಅವರನ್ನು ನೇಮಿಸಲಾಗಿದ್ದು, ನೇಮಕಗೊಂಡ ಅಧಿಕಾರಿಗಳು ಕರ್ನಾಟಕಪೌರಸಭೆ ನಿಯಮ 1965 ರ ನಿಯಮ 01 ರಿಂದ 18 ರ ವರೆಗಿನ ನಿಯಮದಂತೆ ಚುನಾವಣೆ ನಡೆಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.