ಉಡುಪಿ – ಉಚ್ಚಿಲ ದಸರಾಗೆ ವೈಭವದ ತೆರೆ

ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ನವದುರ್ಗೆಯರ ಸಹಿತ ಶಾರದಾ ಮಾತೆ ವಿಗ್ರಹಗಳ ಜಲಸ್ತಂಭನದೊಂದಿಗೆ 10 ದಿನಗಳ ಕಾಲ ನಡೆದ ಉಡುಪಿ- ಉಚ್ಚಿಲ ದಸರಾ ಮಹೋತ್ಸವ ವೈಭವದಿಂದ ಸಂಪನ್ನಗೊಂಡಿತು. ಚಂಡಿಕಾ ಯಾಗ ವಿಸರ್ಜನಾ ಶೋಭಾಯಾತ್ರೆಯ ಪ್ರಯುಕ್ತ ಬೆಳಗ್ಗಿನಿಂದಲೇ ಸಹಸ್ರಾರು ಮಂದಿ ಕ್ಷೇತ್ರಕ್ಕೆ ಬಂದಿದ್ದು ಬೆಳಿಗ್ಗೆ 10.30 ಕ್ಕೆ ಪಲ್ಲ ಪೂಜೆ ನೆರವೇರಿಸಿ 11 ರಿಂದಲೇ ಮಹಾ ಅನ್ನಸಂತರ್ಪಣೆ ಆರಂಭವಾಯಿತು. ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ಹಾಗೂ ಶಾರದಾ ಮಾತೆಗೆ ಮಹಾ ಮಂಗಳಾರತಿ ನಡೆಯಿತು. ಕ್ಷೇತ್ರದ ಪ್ರಧಾನ ತಂತ್ರಿ ರಾಘವೇಂದ್ರ ತಂತ್ರಿ […]