‘ತಾಸೆಯ ಪೆಟ್ಟಿಗೆ’ ಹೆಣ್ಣು ಹುಲಿ ಕುಣಿತ

ಪಡುಬಿದ್ರಿ: ‘ತಾಸೆಯ ಪೆಟ್ಟಿಗೆ’ ಹೆಣ್ಣು ಮಕ್ಕಳ ಹುಲಿ ಕುಣಿತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ಉಚ್ಚಿಲದ ಶ್ರೀಮಹಾಲಕ್ಷ್ಮಿ ದೇವಸ್ಥಾನ ಸಭಾಂಗಣದಲ್ಲಿ ಉಚ್ಚಿಲ ದಸರಾ ಪ್ರಯುಕ್ತ ಉಡಪಿಯ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ, ಶನಿವಾರ ನಡೆದ ‘ಹೆಣ್ಣು ಹುಲಿ ನೃತ್ಯ ಸ್ಪರ್ಧೆ’ಯಲ್ಲಿ 20 ತಂಡಗಳು ಭಾಗವಹಿಸಿದ್ದವು. 5 ವರ್ಷದ ಪುಟಾಣಿಯಿಂದ ಹಿಡಿದು 60 ವರ್ಷ ವಯಸ್ಸಿನೊಳಗಿನ ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿವಿಧ ರೀತಿಯ ಹುಲಿ ನೃತ್ಯಗಳು, ಅಕ್ಕಿಮುಡಿ ಎಸೆತ, ನೃತ್ಯದಲ್ಲಿ ವಿವಿಧ ಕಸರತ್ತು ಮಾಡುವ ಮೂಲಕ ಗಂಡು ಹುಲಿ ವೇಷಧಾರಿಗಳಿಗೆ ಸವಾಲೊಡ್ಡುವಂತಿತ್ತು. […]