ಉಡುಪಿ: ಕೋಡಿಬೆಂಗ್ರೆ ಸಮುದ್ರದ ಮಧ್ಯೆ ಪ್ರವಾಸಿ ದೋಣಿ ಮುಳುಗಡೆ ಪ್ರಕರಣ: ಇಬ್ಬರು ಮೃತ್ಯು, ಓರ್ವನ ಸ್ಥಿತಿ ಗಂಭೀರ.!

ಉಡುಪಿ: ಕೋಡಿಬೇಂಗ್ರೆಯ ಡೆಲ್ಟಾ ಬೀಚ್ ಬಳಿ ಸೋಮವಾರ ಬೆಳಿಗ್ಗೆ ಪ್ರವಾಸಿ ದೋಣಿಯೊಂದು ಸಮುದ್ರ ಮಧ್ಯೆ ಮುಳುಗಡೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರವಾಗಿ ಅಸ್ವಸ್ಥಗೊಂಡ ನಾಲ್ವರ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಇನ್ನೋರ್ವ ಸ್ಥಿರವಾಗಿದ್ದಾನೆ. ಮೈಸೂರು ಮೂಲದ ಶಂಕರಪ್ಪ (22) ಮತ್ತು ಸಿಂಧು (23) ಮೃತ ದುರ್ದೈವಿಗಳು. ದಿಶಾ (26) ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮರಾಜ್ ( 26) ಎಂಬವರು ಚಿಕಿತ್ಸೆಗೆ ಸ್ಪಂದಿಸಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ರೆಸಾರ್ಟ್ ರೊಂದರಲ್ಲಿ […]