ಕುಸಿತ ಕಂಡಿದ್ದ ‘ಟೊಮೆಟೊ’ ಬೆಲೆ ಮತ್ತೆ ಏರಿಕೆ!

ಬೆಂಗಳೂರು: ನಗರದಲ್ಲಿ 15 ದಿನದಿಂದ ತೀವ್ರ ದರ ಕುಸಿತ ಕಂಡಿದ್ದ ಟೊಮೆಟೊದ ಬೆಲೆ ಮತ್ತೆ ಏರಿಕೆಯಾಗಿದೆ. ಪ್ರತಿ ಕೆ.ಜಿಗೆ ₹20ರಿಂದ ₹30ರಂತೆ ಮಾರಾಟವಾಗುತ್ತಿದ್ದ ಟೊಮೆಟೊ, ಈಗ ಕೆ.ಜಿ.ಗೆ ₹80ರಂತೆ ಮಾರಾಟವಾಗುತ್ತಿದೆ. ಟೊಮೆಟೊ ಬೆಳೆಯ ಇಳುವರಿ ಕುಂಠಿತಗೊಂಡಿದ್ದು, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ಆದ್ದರಿಂದ ದರ ಹೆಚ್ಚಳಗೊಂಡಿದೆ. ಕೆ.ಆರ್‌. ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆ.ಜಿಗೆ ₹60ಕ್ಕೆ ದರವಿದ್ದರೆ, ಇತರೆ ಪ್ರದೇಶಗಳಲ್ಲಿ ₹80ರಂತೆ ಮಾರಾಟ ಮಾಡಲಾಗುತ್ತಿದೆ. ‘ಮೂರು ನಾಲ್ಕು ದಿನಗಳಿಂದ ಸತತವಾಗಿ ಬೆಲೆ ಏರುತ್ತಲೇ ಸಾಗಿದೆ. ಚಿಕ್ಕಬಳ್ಳಾಪುರ ಹಾಗೂ […]