ಉಡುಪಿ: ಹೋಲ್‌ಸೇಲ್ ಅಂಗಡಿಯ ಶಟರ್ ಮುರಿದು ಲಕ್ಷಾಂತರ ರೂ. ಕಳ್ಳತನ
ಉಡುಪಿ: ಹೋಲ್‌ಸೇಲ್ ಅಂಗಡಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆ ನಗರದ ಮೈತ್ರಿ ಕಾಂಪ್ಲೆಕ್ಸ್‌ನ ಕೆಳಮಹಡಿಯಲ್ಲಿ ನಡೆದಿದೆ. ಗುಟ್ಕಾ, ಸಿಗರೇಟ್ ಮಾರಾಟ ಮಾಡುವ ನಗರದ ರಮಾ ಎಂಟರ್‌ಪ್ರೈಸ್ ( ಮಹಾದೇವಿ) ಸಗಟು ವ್ಯಾಪಾರದ ಅಂಗಡಿಯಲ್ಲಿ ಮಂಗಳವಾರ ಮಧ್ಯರಾತ್ರಿ ಸುಮಾರಿಗೆ ಘಟನೆ ನಡೆದಿದ್ದು, ಅಂಗಡಿಯ ಡ್ರಾವರ್‌ನಲ್ಲಿದ್ದ ಸುಮಾರು 12ಲಕ್ಷ ರೂ.ಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಕಳೆದ ಮೂರು ದಿನಗಳಿಂದ ಬ್ಯಾಂಕ್‌ಗಳಿಗೆ ಸಾಲು ರಜೆ ಇದ್ದ ಕಾರಣ ಅಂಗಡಿ ಮಾಲೀಕ ರವೀಂದ್ರ ನಾಯಕ್ […]