ಪ್ರಾಂಶುಪಾಲರು ಮಕ್ಕಳನ್ನು ನಡೆಸಿಕೊಂಡ ರೀತಿ ಸರಿಯಿರಲಿಲ್ಲ: ಕುಂದಾಪುರ ಶಿಕ್ಷಕನ ಪ್ರಶಸ್ತಿ ತಡೆ ಹಿಡಿದ ವಿಚಾರದ ಕುರಿತು ಶಿಕ್ಷಣ ಸಚಿವ ಪ್ರತಿಕ್ರಿಯೆ.

ಬೆಂಗಳೂರು, ಸೆ.5 : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ರಾಜ್ಯಮಟ್ಟದ ‘ಉತ್ತಮಪ್ರಶಸ್ತಿ’ ಯನ್ನು ಸದ್ಯಕ್ಕೆ ತಡೆಹಿಡಿದಿರುವ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಉಡುಪಿ ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಜಿ.ರಾಮಕೃಷ್ಣ ಅವರು ಮಕ್ಕಳನ್ನು ನಡೆಸಿಕೊಂಡ ರೀತಿ ಸಮಸ್ಯೆಯಾಗಿತ್ತು. ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಪ್ರಚಾರದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಮುಂದಿನ ಸೂಚನೆ ನೀಡುವವರೆಗೂ ಪ್ರಶಸ್ತಿಯನ್ನು ತಡೆಹಿಡಿದಿದೆ. 2021 ರಲ್ಲಿ ರಾಜ್ಯದಲ್ಲಿ ಹಿಜಾಬ್ […]